Friday, June 25, 2010

ನೆನಪು ಗಳು ನೆರಳಿನಂತೆ



ಹೊಸ ಬಾಳಿನ ಹೊಸ್ತಿಲಲಿ ಹೊಸ ಕನಸುಗಳ ಕಾಣುತಾ.. ಜೊತೆಯಲಿ ಜೊತೆ ಜೊತೆಯಲಿ ಸಾಗುತಾ. ನಲಿಯುತ ನಲಿ ನಲಿಯುತ ಸಾಗುತಿದೆ
ಜೀವನದ ಪಯಣ, ನೂರಾರು ಆಸೆಗಳ ಸಾವಿರಾರು ಕನಸುಗಳನ್ನು ಹೊತ್ತು ಹೊಸ ಬದುಕಿನ
ಆರಂಭಕ್ಕಾಗಿ ಕಾಯುತ್ತಿರುವೆ......






ನೆನಪು ಗಳು ನೆರಳಿನಂತೆ ಅವು ಸದಾ ನಮ್ಮ ನ್ನು ಹಿಂಬಾಲಿಸುತ್ತವೆ, ಮರೆಯ ಬೇಕಾಗಿರುವುದು ಪದೇ ಪದೇ ನೆನಪಾಗುತ್ತದೆ ನಪಿರಬೇಕದದ್ದು ಬೇಗನೆ ಮರೆತು ಹೋಗುತ್ತದ. ನೆನಪುಗಳೇ ತುಂಬಾ ವಿಭಿನ್ನವಾದವು ಬಾಲ್ಯದ್ದೇ ಒಂದು ತರಹದ ನೆನಪುಗಳು, ಶಾಲೆ ನೆನಪುಗಳು, ಕಾಲೇಜು ದಿನಗಳದ್ದೆ ಒಂದು ತರಹದ ನೆನಪುಗಳು ಈಗೆ ನೆನಪುಗಳು ಒಂದೊಂದು ಭಾವಗಳನ್ನು ಪಸರಿಸುತ್ತವೆ, ಕೆಲವು ನೆನಪು ಸಿಹಿಯಗಿದ್ದರೆ ಹಲವು ಕಹಿಯಾಗಿರುತ್ತವೆ, ನಾವು ಸಿಹಿ ನೆನಪುಗಳನ್ನು ಮರೆತರು ಕಹಿ ನೆನಪುಗಳನ್ನು ಮರೆಯಲಾಗದು ಅಲ್ಲವೇ????????????????????


ನೆನಪು ನೆನಪು ಸಿಹಿ ನೆನಪು

ಮರಳಿ ಬಾ
ಬಾಲ್ಯದ ನೆನಪೇ
ಬಣ್ಣದ ಕನಸಾಗಿ

ಮರಳಿಸು..
ಹೊಸ ಚೇತನವಾ
ಬದುಕಿಗೆ ಬೆಳಕಾಗಿ......


ಜೀವನವೆಂಬ ಗಾಯನದಲ್ಲಿ
ಗಾಯನವೆಂಬ ಭಾವನೆಯಲ್ಲಿ
ಕನಸುಗಳೆಂಬ ಕಲ್ಪನೆ ಚೆಲ್ಲಿ
ಬಿತ್ತಿ ಬೆಳೆದೆನು ಅನುರಾಗದ ಬಳ್ಳಿ

ಮನಸಿನೊಳಗಿನ ಕನಸುಗಳ್ಳೆಲ್ಲವು
ನೆನಸಾಗುವುದೇ ಹೇಳು
ಬದುಕಿನೊಳಗಿನ ಬವಣೆಗಳೆಲ್ಲವೂ
ಕೊನೆಯಾಗುವುದೇ ಬಾಳು

ಹುಟ್ಟು ಸಾವು ಎರಡರ ನಡುವೆ
ಮೂರು ದಿನದ ಬಾಳಿನಲ್ಲಿ
ನಮ್ಮ ಮನದೊಳು
ನೂರು ಕನಸುಗಳ ಹೊತ್ತು
ಸಾವಿರ ಬಯಕೆಗಳ ಬಿತ್ತಿ
ಸಾಗುತಿದೆ ಬದುಕು

ಏಳು ಬೀಳಿನ ಬಾಳಿನಲಿ
ಏಳಿಗೆ ಒಂದೇ ನಿಮಗಿರಲಿ
ಎಂದೆಂದೂ ನಿಮ್ಮ ಮುಗದಲ್ಲಿ ನಗುವಿರಲಿ
ಆ ನಗುವಿನಲಿ ನನ್ನ ನೆನಪಿರಲಿ













8 comments:

Unknown said...

priya geleti,

tumbaa chennagide nimma bhavanegalu , jeevanada bagge nimagiruva aakakankshegalu tumbaa mahattaravaagide...

nimma baalyada kavana nannannu kshanakaala nanna baalyada nenepugalige kaluhisitu...

TUMBAA CHENNAGIDE...

neevu omme MANADANGALADA HANIMUTTUGALU samudaayakke beti kodi adu nimmantaha JEEVAATMAGALA taanavaagide ...

Guruprasad said...

ತುಂಬಾ ಚೆನ್ನಾಗಿ ಬರೆದಿದ್ದೀರ ನೆನಪುಗಳ ಬಗ್ಗೆ.... ಚೆನ್ನಾಗಿ ಇದೆ,, ಮುಂದುವರಿಸಿ....
ಸಾದ್ಯವಾದರೆ ನನ್ನ ಬ್ಲಾಗಿಗೂ ಬಂದು ಹೋಗಿ ಸ್ನೇಹ....

http://guruprsad.blogspot.com/

areguli said...

ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು - ಬಾಳುವು
ದಂತೆ ಕಂಡಯ್ಯ
http://areguli.blogspot.com

ಸಾಗರದಾಚೆಯ ಇಂಚರ said...

ಸ್ನೇಹ,

ನೆನಪುಗಳ ಮಾತು ಮಧುರ ಅಂತಾರೆ

ಸುಂದರವಾಗಿ ಬರೆದಿದ್ದಿರಾ

ನಿಮ್ಮ ಬ್ಲಾಗ್ ಗೆ ಮೊದಲ ಭೇಟಿ

ಒಳ್ಳೆಯ ಬರಹ

ಬರೆಯುತ್ತಿರಿ

prabhamani nagaraja said...

ನೆನಪುಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ. ಸು೦ದರ ಕವನ. ಧನ್ಯವಾದಗಳು. ನನ್ನ ಬ್ಲಾಗ್ ಗೆ ಒಮ್ಮೆ ಭೇಟಿ ಕೊಡಿ.

Unknown said...

nanage bahala santhoshavaadaddu nimma baravanigeyalliya bhavanege, adu ondu selethada sthavara endu karedare athishayokthi yaadithu..

kanditha santhoshagondidene.. munduvarisi bhavaneya nimma bhavaksharada hrustiya.

Chandru.U.M said...

ನೆನಪುಗಳ ಬಗ್ಗೆ ಬಹಳ ಚೆನ್ನಾಗಿ ಬರೆದಿದ್ದೀರಿ.
Totally Very Good....nimage namma vara patrikeya kayraliyakke omme beti kodi Nalabayalu vara ptrike
Shashadri iyer Road,
Vidya Vardak College offosit,
Corporation Building,
Mandimohalla, Mysore
Ph: 9844764471

saleem said...

ನಮ್ಮ ಹೃದಯ ದಲ್ಲಿ ಬೇರೆಯವರನ್ನು ಬಚ್ಚಿಡೋದು ತುಂಬಾ ಸುಲಭ
ಆದ್ರೆ ನಾವು ಬೇರೆಯವರ ಹೃದಯದಲ್ಲಿ ಮನೆ ಮಾಡೋದು ತುಂಬಾ ಕಷ್ಟ ಅಲ್ವಾ ,,,,,,


******ನನಗಿಂತ ಒಳ್ಳೆ ಗೆಳೆಯರು ಸಿಕ್ಕಿದ್ರೆ ಅವರ ಜೊತೆ ಹೋಗು,ನಾನು ತಡೆಯೊಲ್ಲ ಆದ್ರೆ ಅವ್ರು ನಿನ್ನ ಕೈ ಬಿಟ್ಟಾಗ ಒಂದು ಸಾರಿ ಹಿಂತಿರುಗಿ ನೋಡು ನಾನು ನಿನಗಾಗಿ ಕಾಯ್ತಾ ಇರ್ತೀನ********


"""""""""ಇ ಪಾಪಿ ದುನಿಯಾ ಪ್ರೀತ್ಸೋದು ಕಲಿಸಿ, ಉಳಿಸೋದು ಕಲಿಸಿಲ್ಲ ,,
ಓ ಗೆಳೆಯ ಇನ್ನೇನು ಉಳಿದಿಲ್ಲ """""""""''

**********ನಾಳೆ ನಮ್ ಗೆಳೆತನ ಕಟ್ ಆದ್ರೆ ನಿಮಗೆ ನನ್ನಂತ ನೂರು ಗೆಳೆಯರು ಸಿಗಬಹುದು ಆದ್ರೆ ನಂಗೆ ನಿಮ್ಮಂತ ಒಬ್ಬ ಗೆಳತಿ ಸಿಗೋಲ್ಲ ಯಾಕಂದ್ರೆ ಆಕಾಶದಲ್ಲಿ ನೂರಾರು ನಕ್ಷತ್ರ ಇದ್ರೂ ಚಂದ್ರ ಇರೋದು ಒಬ್ಬನೇ ,,,,,,,,,,,, **********