Monday, April 11, 2011

ನನ್ನ ನೆರಳು - ಜೊತೆಗಿನ ಬದುಕು



ನನ್ನ ನೆರಳು - ಜೊತೆಗಿನ ಬದುಕು

ಬದುಕಿನ ಆರಂಭದಿಂದ ಅಂತ್ಯದವರೆಗೆ
ಪ್ರತಿ ದಿನ ಪ್ರತಿ ಕ್ಷಣ ನೀನಿರುವೆ ಜೊತೆಗೆ

ಈ ಭೂಮಿಯಲಿ ನನಗಾರು ಇಲ್ಲ ಎನಿಸಿದರೆ
ನನ್ನ ಎದುರಲೇ ನಿಂತು ನಾನಿರುವೆ ಎನುವೆ


ಹಗಲಿನಲ್ಲಿ ನನ್ನ ಬೆಂಬಿಡದೆ ಬರುವೆ
ಇರುಳಿನಲ್ಲಿ ನನ್ನೊಳು ಬೆರೆತು ಬಿಡುವೆ

ಯಾವ ಜನ್ಮದ ನಂಟೋ ಗೊತ್ತಿಲ್ಲ ತಿಳಿದಿಲ್ಲ
ನನ್ನ ಜೊತೆಗೆ ನೀ ಬೆಳದು ಬಂದಿರುವೆ
ನನ್ನೊಳಗೆ ನೀ ಬೆರೆತು ಹೋಗಿರುವೆ

ಬದುಕಿನಲು ಜೊತೆಯಾಗಿ ಇರುವೆ
ಅಂತ್ಯದಲು ಜೊತೆಯಾಗಿ ಬರುವೆ

ನನ್ನ ನೋವು ನಲಿವುಗಳೆಲ್ಲವನು ನೀ ಬಲ್ಲೆ
ಅ ಸಮಯದಲಿ ನೀನಿದ್ದೆ ನನ್ನ ಜೊತೆಯಲ್ಲೇ

ನಿನಗೆ ತಿಳಿಯದಾವುದು ನನ್ನ ಬದುಕಲಿ ಇಲ್ಲ
ನನಗೆ ತಿಳಿಯದುದು ಕೂಡ ನಿನಗೆ ತಿಳಿದಿದೆಯಲ್ಲ

ಸಂತಸವ ಸವಿದಿರುವೆ ಸಂಕಟವ ಸಹಿಸಿರುವೆ
ಸಂಗಾತಿ ದೂರಾದರು ನೀ ಹತ್ತಿರದಲೇ ನಿಂತೇ
ಸಂತೈಸುವರಿಲ್ಲದಿದ್ದಾಗಲು ಜೊತೆಯಲ್ಲೇ ಕುಳಿತೆ

ನಾ ನಿಂತಲ್ಲಿ ನಿಂತೆ ಕುಳಿತಲ್ಲೇ ನೀನು ಕುಳಿತೆ
ಸಾವಿನಲು ಜೊತೆಗೂಡಿ ಚಲನೆಯನೆ ಮರೆತೆ

Monday, February 28, 2011

ಇದೇ ನನ್ನ ಬದುಕ???

ಈ ಚಿತ್ರಣವ ನೋಡಿದೊಡನೆ ಮೂಡಿದ ಭಾವವನ್ನು ಇಲ್ಲಿ ಇಟ್ಟಿದ್ದೇನೆ ದಯವಿಟ್ಟು  ಯಾರೂ ಅನ್ಯತಾ ಭಾವಿಸಬಾರದು ....



ನಡೆಯುವ ತವಕ

ನಡೆಯದು ಚಳಕ

ಇದೇ ನನ್ನ ಬದುಕ?

ಎಣ್ಣೆ ಕಾಣದಂಥ ಶಿರ
ಕಿತ್ತು ಬಂದಿರೋ ಕೆರ
ರೇಖೆ ಅಳಿಸಿರೋ ಕರ
ಬಣ್ಣ ಮಾಸಿರೊ ಚರ
ಅನ್ನ ಕಾಣದ ಉದರ

ಕಳೆ  ಇಲ್ಲದ ಮುಖ
ಕೊಳೆ ತುಂಬಿದ ರಖಾ
ಕೊನೆ ಕಾಣದ ದುಃಖ

ಬೇಡಿಡೆದೆ ನೀಡುವರಿಲ್ಲ
ನೀಡುವೆಡೆ ನಡೆಯುವಂತಿಲ್ಲ
ನೋಡುವವರಾರು ನನಗಿಲ್ಲ

ಹೇಳು ಇದೇ ನನ್ನ ಬದುಕ?

Friday, January 14, 2011

ಮಕರ ಸಂಕ್ರಮಣ ಚೈತ್ರಕಾಲದ ಶುಭಾಶಯಗಳು

ಮೂಡಣದ ಅರಮನೆಯ ಕದವು ತೆರೆದು
ಪಡುವಣದ ಕತ್ತಲೆಯ ಪರದೆ ಸರಿದು 
ಹೊಂಬಣ್ಣದ ರವಿಯ ಕಿರಣ ಹರಿದು 
ಕೆಂಬಣ್ಣದ ತಂಬೆಳಕ ಸುರಿದು 
ತಂಪಾದ ತಂಗಾಳಿ ಸುಳಿದು
ಇಂಪಾದ ರಾಗ ಮಿಡಿದು 
ಹೂಕಂಪು ಸೂಸಿ 
ಹೇಳುತಿದೆ 
ನಿಮಗೆ 
ಸಂಕ್ರಾಂತಿ 
ಹಬ್ಬದ ಶುಭಾಶಯಗಳನ್ನು!!!!!!!!!!!!!!

ಗೆಳೆಯ ಗೆಳತಿಯರಿಗೆ ಮಕರ ಸಂಕ್ರಮಣ ಚೈತ್ರಕಾಲದ ಶುಭಾಶಯಗಳು 

 
 
 
 
 















 
ಆತ್ಮೀಯ ಪ್ರೀತಿಯ ಗೆಳೆಯ/ಗೆಳತಿ ಮಿತ್ರರೆ ಇಲ್ಲಿರುವ ಛಾಯಾಚಿತ್ರಗಳು ನಾನೇ ಕ್ಲಿಕ್ಕಿಸಿದಲ್ಲ  ನಾನು ಸಂಗ್ರಹಿಸಿದವುಗಳು ಇಲ್ಲಿರುವ ಚಿತ್ರಗಳು ತಮ್ಮದು ಅನಿಸಿದರೆ/ ಅಭ್ಯಂತರ ಇದ್ದರೆ  ದಯವಿಟ್ಟು ತಿಳಿಸಿ ಅದನ್ನು ತೆಗೆದು ಹಾಕುತ್ತೀನಿ  - ಭಾವಬಿಂದು

Wednesday, December 15, 2010

ಮಳೆ ನಿಂತು ಹೋದ ಮೇಲೆ.........

ಆತ್ಮೀಯ ಪ್ರೀತಿಯ ಗೆಳೆಯ/ಗೆಳತಿ ಮಿತ್ರರೆ ಇಲ್ಲಿರುವ ಛಾಯಾಚಿತ್ರಗಳು ನಾನೇ ಕ್ಲಿಕ್ಕಿಸಿದಲ್ಲ  ನಾನು ಸಂಗ್ರಹಿಸಿದವುಗಳು ಇಲ್ಲಿರುವ ಚಿತ್ರಗಳು ತಮ್ಮದು ಅನಿಸಿದರೆ/ ಅಭ್ಯಂತರ ಇದ್ದರೆ  ದಯವಿಟ್ಟು ತಿಳಿಸಿ ಅದನ್ನು ತೆಗೆದು ಹಾಕುತ್ತೀನಿ  - ಭಾವಬಿಂದು

ಮಳೆ ನಿಂತು ಹೋದ ಮೇಲೆ.........






























ಮಳೆ ನಿಂತು ಹೋದ ಮೇಲೆ... ಹನಿಯೊಂದು ಮೂಡಿದೆ......

ಆತ್ಮೀಯ ಪ್ರೀತಿಯ ಗೆಳೆಯ/ಗೆಳತಿ ಮಿತ್ರರೆ ಮತ್ತೊಮ್ಮೆ ಕೇಳಿಕೊಳ್ಳುತಿದ್ದೀನಿ ಇಲ್ಲಿರುವ ಛಾಯಾಚಿತ್ರಗಳು ನಾನೇ ಕ್ಲಿಕ್ಕಿಸಿದಲ್ಲ  ನಾನು ಸಂಗ್ರಹಿಸಿದವುಗಳು ಇಲ್ಲಿರುವ ಚಿತ್ರಗಳು ತಮ್ಮದು ಅನಿಸಿದರೆ/ ಅಭ್ಯಂತರ ಇದ್ದರೆ  ದಯವಿಟ್ಟು ತಿಳಿಸಿ ಅದನ್ನು ತೆಗೆದು ಹಾಕುತ್ತೀನಿ  - ಭಾವಬಿಂದು