ಹೊಸ ಬಾಳಿನ ಹೊಸ್ತಿಲಲಿ ಹೊಸ ಕನಸುಗಳ ಕಾಣುತಾ.. ಜೊತೆಯಲಿ ಜೊತೆ ಜೊತೆಯಲಿ ಸಾಗುತಾ. ನಲಿಯುತ ನಲಿ ನಲಿಯುತ ಸಾಗುತಿದೆ
ಜೀವನದ ಪಯಣ, ನೂರಾರು ಆಸೆಗಳ ಸಾವಿರಾರು ಕನಸುಗಳನ್ನು ಹೊತ್ತು ಹೊಸ ಬದುಕಿನ
ಆರಂಭಕ್ಕಾಗಿ ಕಾಯುತ್ತಿರುವೆ......
ನೆನಪು ಗಳು ನೆರಳಿನಂತೆ ಅವು ಸದಾ ನಮ್ಮ ನ್ನು ಹಿಂಬಾಲಿಸುತ್ತವೆ, ಮರೆಯ ಬೇಕಾಗಿರುವುದು ಪದೇ ಪದೇ ನೆನಪಾಗುತ್ತದೆ ನಪಿರಬೇಕದದ್ದು ಬೇಗನೆ ಮರೆತು ಹೋಗುತ್ತದ. ನೆನಪುಗಳೇ ತುಂಬಾ ವಿಭಿನ್ನವಾದವು ಬಾಲ್ಯದ್ದೇ ಒಂದು ತರಹದ ನೆನಪುಗಳು, ಶಾಲೆ ನೆನಪುಗಳು, ಕಾಲೇಜು ದಿನಗಳದ್ದೆ ಒಂದು ತರಹದ ನೆನಪುಗಳು ಈಗೆ ನೆನಪುಗಳು ಒಂದೊಂದು ಭಾವಗಳನ್ನು ಪಸರಿಸುತ್ತವೆ, ಕೆಲವು ನೆನಪು ಸಿಹಿಯಗಿದ್ದರೆ ಹಲವು ಕಹಿಯಾಗಿರುತ್ತವೆ, ನಾವು ಸಿಹಿ ನೆನಪುಗಳನ್ನು ಮರೆತರು ಕಹಿ ನೆನಪುಗಳನ್ನು ಮರೆಯಲಾಗದು ಅಲ್ಲವೇ????????????????????
ನೆನಪು ನೆನಪು ಸಿಹಿ ನೆನಪು
ಮರಳಿ ಬಾ
ಬಾಲ್ಯದ ನೆನಪೇ
ಬಣ್ಣದ ಕನಸಾಗಿ
ಮರಳಿಸು..
ಹೊಸ ಚೇತನವಾ
ಬದುಕಿಗೆ ಬೆಳಕಾಗಿ......
ಜೀವನವೆಂಬ ಗಾಯನದಲ್ಲಿ
ಗಾಯನವೆಂಬ ಭಾವನೆಯಲ್ಲಿ
ಕನಸುಗಳೆಂಬ ಕಲ್ಪನೆ ಚೆಲ್ಲಿ
ಬಿತ್ತಿ ಬೆಳೆದೆನು ಅನುರಾಗದ ಬಳ್ಳಿ
ಮನಸಿನೊಳಗಿನ ಕನಸುಗಳ್ಳೆಲ್ಲವು
ನೆನಸಾಗುವುದೇ ಹೇಳು
ಬದುಕಿನೊಳಗಿನ ಬವಣೆಗಳೆಲ್ಲವೂ
ಕೊನೆಯಾಗುವುದೇ ಬಾಳು
ಹುಟ್ಟು ಸಾವು ಎರಡರ ನಡುವೆ
ಮೂರು ದಿನದ ಬಾಳಿನಲ್ಲಿ
ನಮ್ಮ ಮನದೊಳು
ನೂರು ಕನಸುಗಳ ಹೊತ್ತು
ಸಾವಿರ ಬಯಕೆಗಳ ಬಿತ್ತಿ
ಸಾಗುತಿದೆ ಬದುಕು
ಏಳು ಬೀಳಿನ ಬಾಳಿನಲಿ
ಏಳಿಗೆ ಒಂದೇ ನಿಮಗಿರಲಿ
ಎಂದೆಂದೂ ನಿಮ್ಮ ಮುಗದಲ್ಲಿ ನಗುವಿರಲಿ
ಆ ನಗುವಿನಲಿ ನನ್ನ ನೆನಪಿರಲಿ